ಅದುರು ಕಣಜ

ಭೂತಳದ ಗಣಿಯಲ್ಲಿ ಅದುರನ್ನು ಮೇಲ್ಮಟ್ಟದಿಂದ ಕೆಳಮಟ್ಟಕ್ಕೆ ಸಾಗಿಸುವ ಸಾಧನ (ಓರ್ ಬಿನ್). 
ಅದುರನ್ನು ಶೇಖರಿಸುವುದೇ ಇದರ ಮುಖ್ಯ ಉದ್ದೇಶ. ಇದು 50ರಿಂದ 1,000 ಟನ್ ಅದುರು ಶೇಖರಣಾಸಾಮಥ್ರ್ಯ ಉಳ್ಳದ್ದಾಗಿರುತ್ತದೆ. ಅದುರು ಸುರಿತದಿಂದ ಅಪಾಯವಾಗುವಂತೆ ಇದರ ಪಾಶ್ರ್ವಗಳು 450 ಇಳಿಜಾರಾಗಿರುತ್ತವೆ. ದೊಡ್ಡ ಅದುರಿನ ಚೂರುಗಳನ್ನು ತಡೆಹಿಡಿಯಲು ಇದರ ಮೇಲ್ಮುಖಕ್ಕೆ ಉಕ್ಕಿನ ಜಾಲರಿಯನ್ನು ಮತ್ತು ಅದುರನ್ನು ಇಳಿಜಾರು ಡಬ್ಬಿಗೆ ಒಯ್ಯಲು ತಳಭಾಗಕ್ಕೆ ಇಳಿಹೊನಲುಗಳನ್ನು ಅಳವಡಿಸಿರುತ್ತಾರೆ. ಈಗ ಜಾರುವ ಹೊನಲಿಗೆ ಜರಗು ಪೀಠವನ್ನು ಸಹ ಆಳವಡಿಸಿದ್ದಾರೆ. ಇದರ ತಳ ತುದಿ ಇಳಿಬಾವಿಗೆ ಸೇರಿದಂತಿರುತ್ತದೆ. ಈ ಸಾಧನದಿಂದ ಅದುರಿನ ವರ್ಗಾವಣೆಯಲ್ಲಿ ಕಾಲ ಮತ್ತು ಖರ್ಚಿನ ಅಪವ್ಯಯ ಕಡಿಮೆಯಾಗುತ್ತದೆ.					   
(ಟಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ